ಅನಿಸಿಕೆಗಳು… A B C D ಇಂದ –ಅಆಇಈ – ಕಡೆಗೆ
-ಶ್ರೀ ಬಿವಿಕೆ ಶಾಸ್ತ್ರಿ, ಗುರು ಪ್ರಸಾದ, ಆರ್ಲೋಂಡೋ
(ನಾದ ಕನ್ನಡ ಕಿಲಿಮಣೆಯನ್ನು ಬಳಸಲಾಗಿದೆ )
ನಾದ -ಭಾರತೀಯ ಭಾಷಾ ಕಲಿಕೆಗೆ ಒಂದು ವಿಶೇಷ ಕೀಲಿಮಣೆಕೀಲಿಮಣೆಯು ಕಂಪ್ಯೂಟರಿಗೆ ಭಾಷಾ ವರ್ಣಮಾಲೆಯನ್ನು ಕಳುಹಿಸಲು ಬಳಸುವ ಸಾಧನ. ಇತ್ತೀಚಿನ ನಾಲ್ಕು ದಶಕಗಳಲ್ಲಿ ಆಂಗ್ಲ ಭಾಷಿಕ ಕೀಲಿಮಣೆ (QWERTY) ಮೇಲಿನ ಶ್ರೇಣಿಯ ಕ್ರಮದಲ್ಲಿ ಇರುವ ಈ ಸಾಧನವು ವಿಶ್ವಾದ್ಯಂತ ಬಳಕೆಯಲ್ಲಿ ಇದೆ. ಭಾರತೀಯ ಬಾಷೆಗಳ ವರ್ಣಾಕ್ಷರಗಳನ್ನು ಕಂಪ್ಯೂಟರಿನಲ್ಲಿ ಟಂಕಿಸಲು ಇದೇ ಆಂಗ್ಲ ಭಾಷಿಕ ಕೀಲಿಮಣೆಯನ್ನೇ ಬಳಸಲಾಗುತ್ತಿ ದೆ. ತಂತ್ರಾಂಶ ಪರಿಷ್ಕಾರದ (software processing) ಮೂಲಕ ಆಂಗ್ಲಭಾಷಿಕ ಕೀಲೊತ್ತುಗಳ ಮೇಲೆ ಕನ್ನಡ ( ಅಥವಾ ಇತರೆ ಭಾರತೀಯ ಭಾಷಿಕ ವರ್ಣಮಾಲೆಯ) ಅಕ್ಷರಗಳನ್ನು ಸಂಯೋಜನೆ ಮಾಡುವುದರಿಂದ ಕಂಪ್ಯೂಟರಿನ ದೃಶ್ಯ ಪರದೆಯ ಮೇಲೆ ಕನ್ನಡ ( ಅಥವಾ ಇತರೆ ಭಾರತೀಯ ಭಾಷಿಕ ವರ್ಣಮಾಲೆಯ) ಅಕ್ಷರಗಳ ದೃಶ್ಯ ಮೂಡಿಬರುತ್ತದೆ. ಇದನ್ನು ಕನ್ನಡ / ಭಾರತೀಯ ಭಾಷಾ-ಗಣಕೀಕರಣ ಟಂಕನ -ಪ್ರಗತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗಿದೆ.
ಈ ರೀತಿಯಾಗಿ ಉಚ್ಚಾರಣಾ ಪ್ರಧಾನವಾದ ( Voice-Primary ) ಭಾರತೀಯ ಭಾಷೆಗಳ ಟಂಕನ ಕ್ರಮವನ್ನು ಆಂಗ್ಲಭಾಷಿಕ- ಸ್ಪೆಲ್ಲಿಂಗ್ ಮಾದರಿಯ (Spelling character sequence keying in ) ಕ್ರಮದಲ್ಲಿ ಕೀಲಿಮಣೆಯಲ್ಲಿ ಟಂಕಿಸಲು ವಿದ್ಯಾರ್ಥಿಗಳ ತರಬೇತಿಗಾಗಿ, ರಾಜ್ಯ್ಯಸರ್ವಕಾರ, ಶಾಲಾಶಿಕ್ಷಣ ಮಂಡಲಿಗಳು ಹಾಗೂ ಭಾರತೀಯ/ ಕನ್ನಡ- ಭಾಷಾಪ್ರಾಧಿಕಾರಗಳು ಬಹಳ ಶ್ರಮ ವಹಿಸುತ್ತಿವೆ. ಈ ಶ್ರಮ- ವ್ಯಯದ ಹಿಂದಿನ ಉದ್ದೇಶ, ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೂ ಮಾತೃ ಭಾಷೆಯಲ್ಲಿ ಕಂಪ್ಯೂಟರಿನ ಬಳಕೆ ಮಾಡಿಕೊಳ್ಳಲು ತರಬೇತಿ ನೀಡಬೇಕೆಂಬ ಗುರಿ ;ಇದು ನಿಜವಾಗಿ ಅತಿ ಮಹತ್ತ್ವದ ಅಂಶವಾಗಿದೆ. ಆದರೆ ಆಂಗ್ಲಭಾಷೆಯ ಆಧಾರದ ಮೇಲೆ ನೀಡಲಾಗುತ್ತಿರುವ ಮಾತೃಭಾಷಾ-ಕಂಪ್ಯೂಟರ್ ತರಬೇತಿ ಮೂಲ ಉದ್ದೇಶವನ್ನು ಸಫಲಗೊಳಿಸುತ್ತದೆಯೇ ? ಈ ಅಂಶವನ್ನು ಪರಿಶೀಲಿಸೋಣ.
ಕನ್ನಡ ಭಾಷಾ ಕಲಿಕೆ ಕಂಪ್ಯೂಟರಿನಲ್ಲಿ ಕನ್ನಡ -ಭಾಷಾ ಸ್ವಭಾವಕ್ಕೆ -ಅನುಗುಣವಾಗಿರಬೇಕಾದರೆ ಕೀಲಿಮಣೆಯಲ್ಲಿ ಅಕ್ಷರ ವಿನ್ಯಾಸ ಕನ್ನಡ ಭಾಷಾ
ಶೈಲಿಗೆ ಅನುಗುಣವಾಗಿ ಇರಬೇಕು. ಕನ್ನಡದ ವರ್ಣ-ಮಾಲೆಯ ” ಅಆಇಈ” – ಕ್ರಮವನ್ನು – ಆಂಗ್ಲಭಾಷಾ ಅಕ್ಷರ ಮಾಲೆಯ A B C D (ಅ ಬ ಚ ಡ ) ಅಥವಾ ಬೇರೆ ಸ್ಪೆಲ್ಲಿಂಗ್ ಕ್ರಮಕ್ಕೆ ಹೊಂದಾಣಿಕೆ ಮಾಡಿದಾಗ ಭಾಷಾ ವಿಸಂಗತಿ ಉಂಟಾಗುತ್ತದೆ. ಕಲಿಕೆದಾರನ ಮನಸ್ಸಿನಲ್ಲಿ ಅಕ್ಷರ ಟಂಕನೆಗೆ ಮೊದಲು ಉಚ್ಚಾರಣೆ – ಸ್ಪೆಲ್ಲಿಂಗ್ ಹೊಂದಾಣಿಕೆಗಳ ಕಾರಣಾವಾಗಿ ಭಾಷಿಕ ಗೊಂದಲ ಮೂಡಿಬರುತ್ತದೆ. ಇದರಿಂದಾಗಿ ಆಂಗ್ಲ-ಭಾಷಿಕ ಕೀಲಿಮಣೆಯಲ್ಲಿ ಕನ್ನಡಕಲಿಕೆಯ ಮೂಲವಿನ್ಯಾಸದಲ್ಲೇ ಕನ್ನಡದ ಆತ್ಮ -ಪ್ರಾಣವಾಗಿ ಆಂಗ್ಲಭಾಷೆ ಸ್ಥಿರವಾಗಿ ನಿಂತುಬಿಡುತ್ತದೆ. ಕಲಿಕೆದಾರನ ಮನಸ್ಸಿನಲ್ಲಿ ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಗೆ ಆಂಗ್ಲ ವಾಸನೆ ಅತ್ಯಾವಶ್ಯಕ ಎಂಬ ಅರಿವು ಮೂಲಾಧಾರ ಸ್ವರೂಪದಲ್ಲಿ ಸ್ಥಿರವಾಗಿ ಶಾಶ್ವತವಾಗಿ ಸ್ಥಾನ ಪಡೆಯುತ್ತದ
ನಾದ-ಕೀಲಿಮಣೆಯಲ್ಲಿ ಕನ್ನಡ ಟಂಕನ ಮಾಡಬೇಕಾದರೆ ಬಳಕೆದಾರನ ಮನಸ್ಸು ಮತ್ತು ಬೆರಳುಗಳು ಕನ್ನಡ ವರ್ಣಮಾಲೆಯ ಕ್ರಮದಂತೆ ಕೀಲಿಮಣೆಗಳಲ್ಲಿ ಅಕ್ಷರ-ಜೋಡಿಕೆಗೆ ಟಂಕನ ಮಾಡಬೇಕಾಗುತ್ತದೆ. ಎಂದರೆ ಅಮ್ಮ -ಅಪ್ಪ ಎಂದು ಟಂಕಿಸಬೇಕಾದರೆ ಕಲಿಕೆದಾರನ ಮನಸ್ಸಿನಲ್ಲಿ ಕನ್ನಡದ ಕ್ರಮವಾದ < ಅ – ಮ ಗೆ ಒತ್ತಕ್ಷರ ಮ / ಅ – ಪ ಗೆ ಒತ್ತಕ್ಷರ ಪ > ಎಂಬ ವರ್ಣ -ಧ್ವನಿ ಶ್ರೇಣಿ ಮೂಡಬೇಕು ಹಾಗೂ ಇದಕ್ಕೆ ಅನುಗುಣವಾಗಿ ಕೀಲಿಮಣೆಯಲ್ಲಿ ಕೀಲಿಗಳನ್ನು ಒತ್ತಬೇಕು. ಇದರಿಂದ ಅಮ್ಮ -ಅಪ್ಪ ಎಂದು ಟಂಕಿಸಬೇಕಾದರೆ ಕಲಿಕೆದಾರನ ಮನಸ್ಸಿನಲ್ಲಿ a-mm-a /a-pp-a ಎಂಬ ಆಂಗ್ಲ ಅಕ್ಷರ ಶ್ರೇಣಿ ಬರುವುದಕ್ಕೆ ಅವಕಾಶವಿಲ್ಲ. ಇದರಿಂದಾಗಿ ಭಾಷಾಟಂಕನದಲ್ಲಿ ಭಾಷಾ ಶುದ್ಧತೆ ಮನಸ್ಸಿನಲ್ಲಿ ಹಾಗೂ ಬೆರಳಚ್ಚು ಟಂಕನದಲ್ಲಿ ಏಕರೂಪವಾಗಿರುತ್ತದೆ.
ಇದೇ ಕೀಲಿಮಣೆಯಲ್ಲಿ ಆಂಗ್ಲ-ಪದಗಳನ್ನು ಟಂಕಿಸಬೇಕಾದರೆ a-b-c-d ಕ್ರಮದಲ್ಲಿ ಸ್ಪೆಲ್ಲಿಂಗ್ ಆಧಾರದ ಮೇಲೆ ಟಂಕಿಸಲು ಬರುತ್ತದೆ. ಈ ಆಯ್ಕೆಯಲ್ಲಿ ಕನ್ನಡ ವರ್ಣಮಾಲಾ ಕ್ರಮದ ಅನು-ಪಲ್ಲವಿ ಇರುವುದಿಲ್ಲ. ಹೀಗಾಗಿ ಆಂಗ್ಲ ಭಾಷಾ ಶುದ್ಧ ಕಲಿಕೆಗೆ ಯಾವುದೇ ತೊಂದರೆ ಇರಿವುದಿಲ್ಲ.
ನಾದ ಕೀಲಿಮಣೆಯ ಬಳಕೆ -ತರಬೇತಿಗಳಿಗೆ ನಾಲ್ಕು ತಾಸುಗಳಿಗಿಂತ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಕನ್ನಡ ವರ್ಣಮಾಲೆಯ ಸಾಧಾರಣ ಪರಿಚಯ ಇರುವ ಯಾರೇ ಆಗಲಿ, ಒಂದು ತಾಸಿನ ಒಳಗೆ ಸಾಧಾರಣ ಬಳಕೆ ಹಾಗೂ ನಾಲ್ಕು ತಾಸುಗಳಲ್ಲಿ ಕುಶಲತೆಯನ್ನು ಪಡೆದುಕೊಳ್ಳಬಹುದು. ಪ್ರಾಥಮಿಕ ಶಾಲಾ ಶಿಕ್ಷ ಣದಲ್ಲಿ ಭಾಷಾಶುದ್ಧತೆಗೋಸ್ಕರ ನಾದ ಅತ್ಯಂತ ಉಪಯುಕ್ತ ಸಾಧನ. ವೃತ್ತಿಗಳಲ್ಲಿ ತ್ರೈಭಾಷಿಕ ಭ್ಹಾರತೀಯ ಮಾಹಿತಿ ದಾಖಲೆ ದತ್ತಾಂಶಗಳ ಶುದ್ಧ ಟಂಕನಕ್ಕೆ ನಾದ ಕೀಲಿಮಣೆ, ನಿಮ್ಮದೇ ಕಂಪ್ಯೂಟರ್ ಜೊತೆ ಯಾವುದೇ ತಂತ್ರಾಂಶದ ಅವಶ್ಯಕತೆ ಇಲ್ಲದೆ ಬಳಸಬಹುದಾದ ಒಂದು ಸರಳ ಉಪಯುಕ್ತ ಸುಲಭ ಸಾಧನ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ.
Leave a Reply