ಸಂಸ್ಕೃತ ಟೈಪ್ ಮಾಡಲು ಕ-ನಾದ ಕೀಲಿಮಣೆ
ಡಿಜಿಟಲ್ ಯುಗದಲ್ಲಿ ಸಾಂಸ್ಕೃತಿಕ ಭಾಷೆಗಳನ್ನು ಉಳಿಸುವುದು ಬೆಳೆಸುವುದು ಆದ್ಯತೆಯ ಕಾರ್ಯವೇ ಸೈ. ಭಾರತೀಯ ಭಾಷಾ ಕೀಲಿಮಣೆ ಕ-ನಾದ ಫೊನೆಟಿಕ್ಸ್ ಶೋಧಿಸಿರುವ ಕೀಲಿಮಣೆಯು ಸಂಸ್ಕೃತಭಾರತೀ ವಿದ್ಯಾರ್ಥಿಗಳಿಗೆ ಈ ಮಾರ್ಗದಲ್ಲಿನ ಪಯಣವನ್ನು ಇನ್ನಷ್ಟು ಸುಗಮಗೊಳಿಸುವ ಸಾಧನವಾಗಿದೆ. ಭಾಷಾ ವೈವಿಧ್ಯತೆಗೆ ಹೊಂದಿಕೊಡಂತೆ ಇದನ್ನು ಹೆಣೆಯಲಾಗಿದ್ದು, ಈ ಕೀಲಿಮಣೆಯು ಸಂಸ್ಕೃತವನ್ನು ಟೈಪಿಂಗ್ ಮಾಡುವಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸಿ ಆಡುಸಂಸ್ಕೃತ ಹಾಗೂ ಡಿಜಿಟಲ್ಸಂವಹನಗಳ ನಡುವಿನ ಸಮನ್ವಯದ ಸೇತುವೆಯಾಗಿದೆ.
೧. ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು : ಕ-ನಾದಾ ಫೊನೆಟಿಕ್ಸ್ ಕೀಲಿಮಣೆಯ ಮೂಲಕ
ಸಂಸ್ಕೃತಕ್ಕೆ ವೇದಿಕೆಯನ್ನು ಒದಗಿಸಿಭಾಷಾಶಾಸ್ತ್ರೀಯ ಪರಂಪರೆಯ ಸಂರಕ್ಷಣೆಗೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿದೆ. ವಿದ್ಯಾರ್ಥಿಗಳು ನಿರಾತಂಕವಾಗಿ ತಮ್ಮದೇ ಭಾಷೆಯ ಲಿಪಿ ಬಳಸಿ ಸಂಸ್ಕೃತವನ್ನು ಟೈಪ್ ಮಾಡಬಹುದಾಗಿದ್ದು, ತನ್ಮೂಲಕ ಪ್ರಾಚೀನ ಭಾಷೆಗೆ ಶಾಶ್ವತಸ್ಥಾನವನ್ನು ಉಳಿಸಿಕೊಳ್ಳಬಹುದಾಗಿದೆ.
೨. ಸಂಸ್ಕೃತವನ್ನು ಟೈಪ್ ಮಾಡಲು ಸುಲಭ : ಸಂಸ್ಕೃತಭಾರತಿಯ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಮಾತನಾಡಲು ಬಂದರೂ ಅದರ ಲಿಪಿಪರಿಚಯ ಇದ್ದೇ ಇರುತ್ತದೆ ಎಂದು ಹೇಳಲಾಗದು. ಕ-ನಾದ ಕೀಲಿಮಣೆಯು ಬಳಕೆದಾರ-ಸ್ನೇಹಿ ಪರ್ಯಾಯದ ಭರವಸೆ ನೀಡುತ್ತದೆ. ತೆಲುಗು ಕನ್ನಡದಂತಹ ತಮ್ಮದೇ ಮಾತೃಭಾಷೆಯ ಲಿಪಿಯನ್ನು ಬಳಸಿಕೊಂಡು ಸಂಸ್ಕೃತವನ್ನು ಸುಲಲಿತವಾಗಿ ಟೈಪ್ ಮಾಡಲು ಸಾಧ್ಯವಾಗುವಂತೆ ಇದರ ವಿನ್ಯಾಸವನ್ನು ರೂಪಿಸಲಾಗಿದ್ದು, ಸಂಕೀರ್ಣವಾದ ಲಿಪಿಜ್ಞಾನದ ಅಗತ್ಯ ಇರಲೇಬೇಕೆಂದೇನಿಲ್ಲ.
೩. ಭಾಷಾ ತಡೆಬೇಲಿಗೆ ಸೇತುವೆ : ಕ-ನಾದ ಕೀಲಿಮಣೆಯು ವಿವಿಧ ಭಾರತೀಯ ಭಾಷೆಗಳ ನಡುವೆ ಸಮನ್ವಯದ ಸೇತುವೆಯಂತೆ ವಿಶಿಷ್ಠವಾದ ಕಾರ್ಯ ನಿರ್ವಹಿಸುತ್ತದೆ. ಸಂಸ್ಕೃತಭಾರತೀ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಸುಲಲಿತವಾಗಿ ಟೈಪ್ ಮಾಡಲು ತಮ್ಮ ಮಾತೃಭಾಷೆಯ ಬಳಕೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಶೋಧನಾತ್ಮಕ ಸಾಧನವುಭಾಷಾಶಾಸ್ತ್ರೀಯ ನಂಟನ್ನು ಬೆಳೆಸಿ ಪೋಷಿಸುವುದಲ್ಲದೆ, ವಿಭಿನ್ನ ಸಂಸ್ಕೃತಿಗಳ ಬೆಸೆಯುವಿಕೆಗೂ ಕಾರಣವಾಗಿದೆ.
೪. ಭಾಷಾ ವಿದ್ಯಾರ್ಥಿಗಳ ಸಬಲೀಕರಣ : ಕ-ನಾದಾ ಕೀಲಿಮಣೆಯು ವಿದ್ಯಾರ್ಥಿಗಳು ತಮ್ಮನ್ನು ತಾವು ಡಿಜಿಟಲ್ ಭಾಷೆಯಲ್ಲಿ ಅಭಿವ್ಯಕ್ತಪಡಿಸಲು ಅವರ ಕೈಗೆ ಪ್ರಾಯೋಗಿಕ ಸಾಧನವನ್ನು ನೀಡುವ ಮೂಲಕ ಸಂಸ್ಕೃತವಿದ್ಯಾರ್ಥಿಗಳ ಡಿಜಿಟಲ್ ಅಭ್ಯುದಯಕ್ಕೆ, ಸಬಲೀಕರಣಕ್ಕೆ ನೆರವಾಗುತ್ತಿದೆ. ಅಸೈನಮೆಂಟ್ ಟೈಪ್ ಮಾಡುವುದಿರಲಿ, ಕಟೆಂಟ್ ರೂಪಿಸುವುದಿರಲಿ, ಅಥವಾ ಆನ್ಲೈನ್ ಚರ್ಚೆಯೇ ಇರಲಿ, ವಿದ್ಯಾರ್ಥಿಗಳು ನಿರಾತಂಕವಾಗಿ ತಮ್ಮ ಡಿಜಿಟಲ್ ಚಟುವಟಿಕೆಗಳಲ್ಲಿ ಸಂಸ್ಕೃತವನ್ನು ಸಂಯೋಜಿಸಬಹುದಾಗಿದೆ.
೫. ದೇಶೀಯತಾವಾದಕ್ಕೆ ಇಂಬು: ಕ-ನಾದ ಕೀಲಿಮಣೆಯು ಮೇಡ್-ಇನ್-ಇಂಡಿಯಾ ಉತ್ಪಾದನೆಯಾಗಿದ್ದು, ದೇಶೀಯತಾವಾದಕ್ಕೆ ಇಂಬುನೀಡುತ್ತದೆ. ಭಾಷಾವೈವಿಧ್ಯತೆಯ ಮೌಲ್ಯಕ್ಕೆ ಒತ್ತುನೀಡುವ ಡಿಜಿಟಲ್ ಭಾರತದ ದೃಷ್ಟಿಕೋನವನ್ನು ಇದು ಉತ್ತೇಜಿಸುತ್ತದೆ. ಸಂಸ್ಕೃಭಾರತೀ ವಿದ್ಯಾರ್ಥಿಗಳು ಕ-ನಾದ ಕೀಲಿಮಣೆಯನ್ನು ಬಳಸುವ ಮೂಲಕ ಈ ಆಂದೋಲನದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ.
ಕೊನೆಯ ಮಾತು: ಕ-ನಾದ ಫೊನೆಟಿಕ್ಸ್ ರೂಪಿಸಿದ ಕೀಲಿಮಣೆಯು ಸಂಸ್ಕೃತಭಾರತೀ ವಿದ್ಯಾರ್ಥಿಗಳಿಗೆ ಆಡುಸಂಸ್ಕೃತ ಹಾಗೂ ಡಿಜಿಟಲ್ ಸಾಮ್ರಾಜ್ಯದ ನಡುವೆ ನಯವಾದ ಸಮನ್ವಯತೆಯನ್ನು ಸಾಧಿಸುವ ಪರಿವರ್ತನಕಾರಿ ಸಾಧನವಾಗಿದೆ. ಭಾರತೀಯ ಭಾಷಾ ಕೀಲಿಮಣೆಯನ್ನು ತಮ್ಮದಾಗಿಸಿಕೊಂಡು ಸಂಸ್ಕೃತಭಾರತೀ ವಿದ್ಯಾರ್ಥಿಗಳು ಸಂಸ್ಕೃತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಂರಕ್ಷಿಸುವುದಲ್ಲದೆ, ಅನ್ಯೋನ್ಯ ಹಾಗೂ ಅಂತರ್ಗತ ಭಾಷಾಶಾಸ್ತಿಯ ವಿನ್ಯಾಸಕ್ಕೆ ಹೆಚ್ಚುಹೆಚ್ಚು ಕೊಡುಗೆಯನ್ನು ನೀಡಲು ಹೇರಳ ಅವಕಾಶವನ್ನು ಒದಗಿಸಿಕೊಡುತ್ತದೆ.
To enroll for Interesting & Knowledgeable Courses visit the link below:
www.ka-naadagurukula.teachable.com